ಭಖಾರೋ ಭಾವ ಸಂಯುಕ್ತೋ
ರೇ ಪೋ ರಾಗೇನ ಸಂಶ್ರಿತಾಃ
ತಕಾರ ಸ್ತಾಳ ಇತ್ಯಾಹುಃ
ಭರತಾರ್ಥ ವಿಚಕ್ಷಣಾ ||
ರೇ ಪೋ ರಾಗೇನ ಸಂಶ್ರಿತಾಃ
ತಕಾರ ಸ್ತಾಳ ಇತ್ಯಾಹುಃ
ಭರತಾರ್ಥ ವಿಚಕ್ಷಣಾ ||
ಭರತ ಎಂಬ ನಾಮಪದಕ್ಕೆ ಅನೇಕ ನಿರ್ಣಯಗಳಿವೆ. ನಾಟ್ಯಶಾಸ್ತ್ರದ ಕರ್ತೃ ಸಂಸ್ಕೃತದಲ್ಲಿರುವ ಈ ಕೃತಿಯಲ್ಲಿ ಮುಖ್ಯವಾಗಿ ನಾಟ್ಯದ ಮತ್ತು ಸಂಗೀತದ ಕುರಿತಾಗಿ ವಿಶದವಾದ ವಿವರಣೆ ಇರುವುದು.
ನಾಟ್ಯಶಾಸ್ತ್ರವು ತಿಳಿಸುವಂತೆ ಇಂದ್ರಾದಿ ದೇವತೆಗಳು ತಮ್ಮ ಬಿಡುವು ಸಮಯದ ಕಾಲಕ್ಷೇಪ ಮಾಡಲು ಒಂದು ಕಲೆಯನ್ನು ಸೃಷ್ಟಿಸಬೇಕೆಂದು ಬ್ರಹ್ಮನನ್ನು ಪ್ರಾರ್ಥಿಸಿದರಂತೆ. ಬ್ರಹ್ಮನು ಅವರ ಕೋರಿಕೆಯಂತೆ ಋಗ್ವೇದದಿಂದ ಶಬ್ದಗಳನ್ನು, ಸಾಮವೇದದಿಂದ ಸಂಗೀತವನ್ನೂ, ಯಜುರ್ವೇದದಿಂದ ಅಭಿನಯವನ್ನೂ, ಅಥರ್ವಣವೇದದಿಂದ ರಸವನ್ನೂ ಆರಿಸಿ ನಾಟ್ಯವೇದವೆಂಬ ಐದನೆಯ ವೇದವನ್ನು (ಪಂಚಮವೇದ) ಸೃಷ್ಟಿಸಿ ತನ್ನ ಮಗನಾದ ಭರತ ಮುನಿಗೆ ದಯಪಾಲಿಸಿದನು.ಭರತನು ಇದನ್ನು ಶಾಸ್ತ್ರರೂಪದಲ್ಲಿ ಬರೆದು ತನ್ನ ನೂರುಮಕ್ಕಳಿಗೆ ಓದಿಸಿದನು.
ಭರತನಿಂದ ಈ ವಿದ್ಯೆ ಕಲಿತ ಗಂಧರ್ವ ಅಪ್ಸರೆಯರು ಶಿವ ಪರಮಾತ್ಮನ ಮುಂದೆ ನಟಿಸಿದಾಗ ಸಂತುಷ್ಟಗೊಡ ಶಿವನು ತನ್ನ ಗಣಗಳಿಗೆ ಕಲಿಸುವ ಜವಾಬ್ದಾರಿಯನ್ನು ಭರತ ಮುನಿಗೆ ವಹಿಸಿದನು. ಪಾರ್ವತಿದೇವಿಯಿಂದ ’ಲಾಸ್ಯ ನೃತ್ಯ’ದ ಶಿಕ್ಷಣವನ್ನು ಕೂಡಾ ಭರತಮುನಿಯು ಪಡೆದು, ಈ ಮೂಲಕವಾಗಿ ’ಭರತನಾಟ್ಯ’ ಭರತಖಂಡಕ್ಕೆ ಪಸರಿಸಿತು ಎಂಬ ಪ್ರತೀತಿಯಿದೆ.

೧೯ನೇ ಶತಮಾನದ ಆರಂಭದಲ್ಲಿ ಸುಬ್ಬರಾವ್ ನಟುವನಾರ್ ಅವರ ನಾಲ್ವರು ಮಕ್ಕಳಾದ ’ಪಂದನಲ್ಲೂರು ಸಹೋದರ’ರೆನಿಸಿಕೊಂಡ ಚೆನ್ನಯ್ಯ,ಪೊನ್ನಯ್ಯ,ಶಿವಾನಂದ ಮತ್ತು ವಡಿವೇಲು ಇವರುಗಳು ಇಂದಿನ ಭರತನಾಟ್ಯಕ್ಕೆ ಅಲರಿಪು, ಜತಿಸ್ವರ, ಶಬ್ದಂ, ಪದವರ್ಣ, ಜಾವಳಿ, ತಿಲ್ಲಾನ ಮೊದಲಾದವುಗಳನ್ನು ಸಂಯೋಜಿಸುವುದಕ್ಕೆ ಕಾರಣರಾದರು.
ಅಡವುಗಳಿಗಿರುವ ೪ ಲಕ್ಷಣಗಳು :
(೧) ಸ್ಥಾನಕ : ಆರಂಭದಲ್ಲಿ ಮಾಡುವ ಅಥವಾ ನಿಲ್ಲುವ ಭಂಗಿ
(೨) ನೃತ್ಯ : ಆಯಾ ಅಡವುಗಳಿಗೆ ತಕ್ಕಂತೆ ನೃತ್ಯ ಹಸ್ತಗಳಿವೆ. ಅಲಂಕಾರಕ್ಕಾಗಿ ನೃತ್ತಹಸ್ತಗಳನ್ನು ಉಪಯೋಗಿಸುತ್ತಾರೆ, ಆದರೆ ಇವುಗಳಿಗೆ ನಿಜವಾದ ಅರ್ಥವಿಲ್ಲ.
(೩) ಚಾರಿ : ಅಡವುಗಳನ್ನು ಮಾಡುವಾಗ ಬೇಕಾಗುವ ಕಾಲ್ಚಲನೆ ಮತ್ತು ಕೈಗಳ ಚಲನೆಗಳು
(೪) ಹಸ್ತಕ್ಷೇತ್ರ : ಅಡವುಗಳನ್ನು ಮಾಡುವಾಗ ಪ್ರಾರಂಭದಲ್ಲಿ ಕೈಗಳನ್ನು ಇಡಬೇಕಾದ ಜಾಗ, ಚಲನೆಯಾದ ಬಳಿಕ ಹಸ್ತಗಳಿರಬೇಕಾದ ಜಾಗ; ಈ ಗಾಗಗಳು ಮೈಗೆ ಸಂಬಂಧ ಪಟ್ಟು ವಿಶಿಷ್ಟ ದೂರ, ಕೋನಗಳಲ್ಲಿ ಇರಬೇಕು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ